ದಾವಣಗೆರೆ, ಸೆ.17- ದಾವಣಗೆರೆ ತಾಲ್ಲೂಕು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಂಡಲ ಎಸ್.ಟಿ. ಮೋರ್ಚಾಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಧ್ಯಕ್ಷರಾಗಿ ಪ್ಯಾಟೆ ಹನುಮಪ್ಪ ನಲ್ಕುಂದ, ಉಪಾಧ್ಯಕ್ಷರಾಗಿ ರುದ್ರಪ್ಪ ನೀರ್ಥಡಿ, ಪ್ರಭು ಹೆಚ್. ಹೂವಿನಮಡು, ಆರ್. ರಾಮಸ್ವಾಮಿ, ಲೋಕಿಕೆರೆ ಹೆಚ್. ಮಹಾಬಲೇಶ್ವರ ಕೋಟೆಹಾಳ್ ಅವರುಗಳು ನೇಮಕವಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಎಂ. ರಂಗಸ್ವಾಮಿ ಕಣಿವೆಬಿಳಚಿ, ಆರ್.ವೈ. ವಾಸು ಹುಲಿಕಟ್ಟೆ, ಕಾರ್ಯದರ್ಶಿಗಳಾಗಿ ಮಂಜು ನಾಥ ಹೆಚ್. ಕಲ್ಪನಹಳ್ಳಿ, ಶಿವರಾಜ್ ಬಿ. ಬಸವಾಪಟ್ಟಣ, ಪಿ.ಹೆಚ್. ತಿಪ್ಪೇಸ್ವಾಮಿ ಗಿರಿಯಾಪುರ, ಶಿವಕುಮಾರ್ ಎಂ.ಕೆ. ಮ್ಯಾಸರಹಳ್ಳಿ ಹಾಗೂ ಖಜಾಂಚಿಯಾಗಿ ಎನ್. ಶಿವಕುಮಾರ್ ಹಾಲುವರ್ತಿ ಅವರು ಗಳನ್ನು ನೇಮಕ ಮಾಡಿದ್ದಾರೆ. ಗ್ರಾದೇಶ್ ಕೆ.ಹೆಚ್. ಶ್ಯಾಗಲೆ, ಜಿ.ಎಸ್. ರಾಜಪ್ಪ ಹಿಂಡಸಕಟ್ಟೆ, ಎನ್.ಆರ್. ಅರುಣಕುಮಾರ್ ಮಳಲ್ಕೆರೆ, ಹೆಚ್.ಬಿ. ಮಾರುತಿ ಕುಮಾರ್ ಲೋಕಿಕೆರೆ ಅವರುಗಳು ಸದಸ್ಯರಾಗಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಮಾಯಕೊಂಡ ಮಂಡಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಂ. ದೇವೇಂದ್ರಪ್ಪ ಶ್ಯಾಗಲೆ, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಕೃಷ್ಣಕುಮಾರ್ ತ್ಯಾವಣಿಗೆ ಅವರುಗಳು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.