ರಾಣೆಬೆನ್ನೂರು, ಡಿ.27-ಇಲ್ಲಿನ ವಕೀಲರ ಸಂಘದ ಚುನಾವಣೆಯು ಬಿರುಸಿನಿಂದ ನಿನ್ನೆ ನಡೆಯಿತು.
ಯುವ ನ್ಯಾಯವಾದಿ ಬಿ.ಎಚ್. ಬುರಡಿಕಟ್ಟಿ ಅವರು 215 ಮತ ಪಡೆದು ವಿಜಯದ ನಗೆ ಬೀರಿದರು. 105 ಮತಗಳನ್ನು ಪಡೆದು ಉಮೇಶ್ ಗುರುಲಿಂಗಪ್ಪ ಗೌಡ್ರು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಕಣದಲ್ಲಿದ್ದು ಅವರಲ್ಲಿ ಯುವ ನ್ಯಾಯವಾದಿ, ನೋಟರಿ ಪಬ್ಲಿಕ್ ಕುಮಾರ್ ಡಿ. ಮಡಿವಾಳರ 201 ಮತ ಪಡೆದು ವಿಜಯಶಾಲಿ ಯಾದರು. ಪ್ರತಿಸ್ಪರ್ಧಿಗಳಾದ ವಿ.ಎಂ. ಜೋಗಾರ ಮತ್ತು ಎನ್.ಎಸ್. ಕಿಟ್ಟದ ಸೋಲು ಕಂಡರು.
ಒಟ್ಟು 345 ಮತದಾರರಲ್ಲಿ 321 ಮತದಾರರು ತಮ್ಮ ಮತ ಚಲಾಯಿಸಿದ್ದರು. ಕಾರ್ಯದರ್ಶಿಯಾಗಿ ಗಣೇಶ್ ಕೆ. ಮುಂಡಾಸದ, ಸಹ ಕಾರ್ಯದರ್ಶಿಯಾಗಿ ಡಿ.ಬಿ. ಅರಳಿಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದು ಅದೇ ರೀತಿ ಮಲ್ಲಿಕಾರ್ಜುನ್ ಕೆ. ಹರವಿ, ವೇದಮೂರ್ತಿ ಹಿರೇಮಠ, ಮಂಜನಗೌಡ ಹೊಸಗೌಡ್ರ, ಸಂಜೀವ ಕುಮಾರ್ ಚನ್ನಗೌಡ್ರ, ಪ್ರಭು ಶಿರಗಂಬಿಯವರ, ರಾಜು ಬಿದರಿ, ಪ್ರಶಾಂತ್ ಯಕ್ಕನಳ್ಳಿ, ನಬಿ ಹಿರೇಬಿದರಿ, ಶ್ರೀಮತಿ ಸವಿತಾ ಮೊಹರೆ ಅವರು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬಿ.ಸಿ. ಜಂಗಳೇರ, ಉಪಚುನಾವಣೆ ಅಧಿಕಾರಿಯಾಗಿ ಪ್ರಶಾಂತ ಬಣಕಾರ ಕಾರ್ಯ ನಿರ್ವಹಿಸಿದರು.