ಹರಿಹರ, ಡಿ.21- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ದೊಗ್ಗಳ್ಳಿ ಸ.ಹಿ.ಪ್ರಾ ಶಾಲೆಯ ಶಿಕ್ಷಕ ಹೆಚ್.ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಬೆಳ್ಳೂಡಿಯ ಸ.ಹಿ.ಪ್ರಾ ಶಾಲೆಯ ಶಿಕ್ಷಕ ಕರಿಬಸಪ್ಪ ಕುಪ್ಪೇಲೂರು, ಮಲೇಬೆನ್ನೂರಿನ ಭೋವಿ ಕಾಲೋನಿಯ ಸ.ಕಿ.ಪ್ರಾ ಶಾಲೆಯ ಶಿಕ್ಷಕಿ ಶ್ರೀಮತಿ ಜ್ಯೋತಿ, ಪ್ರಧಾನ ಕಾರ್ಯದರ್ಶಿಯಾಗಿ ಧೂಳೆಹೊಳೆ
ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಶ್ರೀಮತಿ ವಿನೋದ, ಸಹ ಕಾರ್ಯದರ್ಶಿಗಳಾಗಿ ಎಕ್ಕೆಗೊಂದಿಯ ಸ.ಹಿ.ಪ್ರಾ ಶಾಲೆಯ ಶಿಕ್ಷಕ ಎಂ.ಹೆಚ್.ನಾಗರಾಜ್, ಹೊಸಪೇಟೆ ಬೀದಿಯ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಶ್ರೀಮತಿ ಮಮತಾ, ಸಂಘಟನಾ ಕಾರ್ಯದರ್ಶಿಗಳಾಗಿ ನಂದಿಗಾವಿಯ ಸ.ಹಿ.ಪ್ರಾ ಶಾಲೆಯ ಶಿಕ್ಷಕ ಕೆ.ಎಂ.ರುದ್ರಪ್ಪ, ಭಾನುವಳ್ಳಿ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಶ್ರೀಮತಿ ಸುಮಂಗಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ
ಬಿ.ಬಿ.ರೇವಣನಾಯ್ಕ ಘೋಷಿಸಿದ್ದಾರೆ.