ಕುಂಬಳೂರು ಗ್ರಾ.ಪಂ.ಗೆ ನಾಲ್ವರು ಅವಿರೋಧ ಆಯ್ಕೆ

ಕುಂಬಳೂರು ಗ್ರಾ.ಪಂ.ಗೆ ನಾಲ್ವರು ಅವಿರೋಧ ಆಯ್ಕೆ - Janathavaniಮಲೇಬೆನ್ನೂರು, ಡಿ. 20 – ಕುಂಬಳೂರು ಗ್ರಾಮ ಪಂಚಾಯಿತಿ ನ ಒಟ್ಟು 18 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು,  ಉಳಿದ 14 ಸ್ಥಾನಗಳಿಗೆ ಇದೇ ದಿನಾಂಕ 27 ರಂದು ಚುನಾವಣೆ ನಡೆಯಲಿದೆ. ನಿಟ್ಟೂರು ಗ್ರಾಮದ 1ನೇ ವಾರ್ಡ್‍ನ ಬಿಸಿಎಂ `ಎ’ ಕ್ಷೇತ್ರದಿಂದ ಶ್ರಿಮತಿ ಅಕ್ಕಮ್ಮ ಕೋಂ ತಿಪ್ಪೇಶ್, ಎಸ್ಟಿ ಮೀಸಲು ಕ್ಷೇತ್ರದಿಂದ  ಶ್ರೀಮತಿ ಗಾಯಿತ್ರಿ ಕೋಂ ಆಂಜನೇಯ, ಬಿಸಿಎಂ `ಬಿ’ಮಹಿಳಾ ಕ್ಷೇತ್ರದಿಂದ ಶ್ರೀಮತಿ ವನಿತಾ ಕೋಂ ವಿಲಾಸಗೌಡ, 2ನೇ ವಾರ್ಡ್‍ನ ಎಸ್ಸಿ ಮೀಸಲು ಕ್ಷೇತ್ರದಿಂದ ಶ್ರೀಮತಿ ಚಂದ್ರಮ್ಮ ಕೋಂ ಮಂಜಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಟ್ಟೂರಿನಲ್ಲಿ ಉಳಿದ 3 ಸ್ಥಾನಗಳಿಗೆ 6 ಜನ ಅಭ್ಯರ್ಥಿಗಳು ಮತ್ತು ಕುಂಬಳೂರಿನಲ್ಲಿ 10 ಸ್ಥಾನಗಳಿಗೆ 22 ಅಭ್ಯರ್ಥಿಗಳು ಹಾಗೂ ವಿನಾಯಕನಗರ ಕ್ಯಾಂಪ್‍ನಲ್ಲಿ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

error: Content is protected !!