ದಾವಣಗೆರೆ, ಡಿ.20- ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಎಸ್.ಪಿ. ಸತ್ಯನಾರಾಯಣರಾವ್, ಉಪಾಧ್ಯಕ್ಷರುಗಳಾಗಿ ಮೋತಿ ಆರ್. ಪರಮೇಶ್ವರರಾವ್, ಸಿ.ಕೆ. ಆನಂದತೀರ್ಥಾಚಾರ್ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಕಾರ್ಯದರ್ಶಿಯಾಗಿ ಯು. ಬಾಲಕೃಷ್ಣ ವೈದ್ಯ, ಸಹ ಕಾರ್ಯದರ್ಶಿ ಡಿ. ಶೇಷಾಚಲ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾರ್ಯಕಾರಿಣಿ ಸದಸ್ಯರಾದ ಸಿ.ಎ. ಗಿರೀಶ್ ನಾಡಿಗ್, ಟಿ. ಉಮಾಕಾಂತ್ ದೀಕ್ಷಿತ್, ಪಿ.ಜಿ. ನಿರಂಜನ್, ಡಾ. ಶಶಿಕಾಂತ್, ಎಸ್.ಜೆ. ಶ್ರೀಧರ್, ಕೋಸಾ ಪ್ರಸನ್ನಕುಮಾರ್, ಬಿ. ಪ್ರಕಾಶ್, ಶಿವಶಂಕರ್ ಕೆ. ದೀಕ್ಷಿತ್, ವಿನಯ್ ಆಚಾರ್ಯ, ಡಾ. ಲವ ಉಪಸ್ಥಿತರಿದ್ದರು.
ಸಂಘದ ಕಚೇರಿಯಲ್ಲಿ ನಿನ್ನೆ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು.