ದಾವಣಗೆರೆ, ಡಿ.13- ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಹಯೋಗದಲ್ಲಿರುವ ಸಹಕಾರ ಭವನ – ಕಲಾ ಪ್ರಕಾಶ ವೃಂದದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಮಣ ಲಾಲ್ ಸಂಘವಿ, ಕಾರ್ಯದರ್ಶಿಯಾಗಿ ಎಸ್.ಕೆ. ವೀರಣ್ಣ, ಉಪಾಧ್ಯಕ್ಷರಾಗಿ ಪೆ.ನಾ. ಗೋಪಾಲರಾವ್, ಸಹ ಕಾರ್ಯದರ್ಶಿಯಾಗಿ ಕೆ. ತಿಮ್ಮಪ್ಪ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಇಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಈ ಆಯ್ಕೆ ಅವಿರೋಧವಾಗಿ ನಡೆಯಿತು.
ನಿರ್ದೇಶಕರಾಗಿ ಜಿ.ಕೆ. ಪಂಚಣ್ಣ, ಎಸ್. ಗುರುನಾಥ್, ಎ. ಬಸವರಾಜಯ್ಯ, ಟಿ. ನಿಜಲಿಂಗಯ್ಯ, ಎ. ವೀರೇಶ್, ಶ್ರೀಮತಿ ಬಿ. ಅನುಸೂಯಮ್ಮ, ಎನ್.ಎ. ಮುರುಗೇಶ್, ಕಿರುವಾಡಿ ಸೋಮಶೇಖರ, ಎ.ಹೆಚ್. ಕುಬೇರಪ್ಪ, ಎಸ್.ಕೆ. ಪ್ರಭುಪ್ರಸಾದ್, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶ್ರೀಮತಿ ಶಶಿಕಲಾ ರುದ್ರಯ್ಯ, ಕೆ.ಹೆಚ್. ಶಿವಯೋಗಪ್ಪ, ಎಂ. ಶಿವಲಿಂಗಸ್ವಾಮಿ, ಜ್ಯೋತಿಪ್ರಕಾಶ್ ಅವರುಗಳು ಆಯ್ಕೆಯಾಗಿದ್ದಾರೆ.