ದಾವಣಗೆರೆ, ಡಿ.3- ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೂತನ ಪ್ರಭಾರಿ ಮತ್ತು ಸಹ ಪ್ರಭಾರಿಗಳನ್ನು ನೇಮಿಸಲಾಗಿದೆ.
ದಾವಣಗೆರೆ ದಕ್ಷಿಣ ಪ್ರಭಾರಿಗಳಾಗಿ ಕೆ.ವಿ. ಗುರುರಾಜ, ಸಹ ಪ್ರಭಾರಿ ಕೆ.ಎಸ್. ಯೋಗಾನಂದ, ದಾವಣಗೆರೆ ಉತ್ತರಕ್ಕೆ ಬಿ.ಎಸ್. ಪ್ರಶಾಂತ್, ವಿ.ಎನ್. ಯೋಗಾನಂದ, ಜಗಳೂರು ಪ್ರೇಮಚಂದ್ರ, ವಿನಯ್, ಹರಿಹರ ನಗರಕ್ಕೆ ಹರೀಶ್ ಕಜ್ಜರಿ , ಕೆ.ಬಿ. ನರೇಂದ್ರ, ಹರಿಹರ ಗ್ರಾಮಾಂತರ ಕಿರಣ್, ಬಿ.ಹೆಚ್. ತಿಲಕ್, ಮಾಯಕೊಂಡಗೆ ಶ್ರೀಕಾಂತ್ ನೀಲಗುಂದ, ಎಂ. ಶಶಿ ಕುಮಾರ್, ಹೊನ್ನಾಳಿ ವಿಕ್ರಮ್ ಎಂ. ಪಾಟೀಲ್, ಸಿ.ಆರ್. ದಿಲೀಪ್, ಚನ್ನ ಗಿರಿ ಚೇತನ್ ಕುಮಾರ್ ಹಾಗೂ ಹೆಚ್. ಪ್ರವೀಣ್ ನೇಮಕಗೊಂಡಿದ್ದಾರೆ ಎಂದು ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ತಿಳಿಸಿದ್ದಾರೆ.