ದಾವಣಗೆರೆ, ಡಿ.3- ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಉಪಾಧ್ಯಕ್ಷರಾಗಿ ಕಿರಣ್ ಹಾಗೂ ವಿನಯ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಬಿ.ಹೆಚ್. ತಿಲಕ್, ಸಾಮಾಜಿಕ ಜಾಲತಾಣದ ಪ್ರಮುಖ್ ಪ್ರೇಮಚಂದ್ರ, ಮಾಧ್ಯಮ ಪ್ರಮುಖ್ ಕೆ.ಬಿ. ನರೇಂದ್ರ, ಕಾರ್ಯಕಾರಿಣಿ ಸದಸ್ಯರಾಗಿ ಎಸ್. ರಾಹುಲ್, ರಾಕೇಶ್, ಡಿ. ರವಿ, ಎಂ.ಎಸ್. ಅರುಣ್ ಕುಮಾರ್, ಎಸ್. ಸುನೀಲ್ ಕುಮಾರ್, ಸಿ. ಚಂದ್ರಶೇಖರ್, ಎನ್.ಆರ್. ಮಂಜುನಾಥ ನಾಯ್ಕ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಧನ್ಯಕುಮಾರ್ ನೇಮಕಗೊಂಡಿದ್ದಾರೆ ಎಂದು ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ತಿಳಿಸಿದ್ದಾರೆ.