ದಾವಣಗೆರೆ, ನ. 14 – ಅಖಿಲ ಭಾರತ ರೆಡ್ಡಿ ಒಕ್ಕೂಟದ ರಾಜ್ಯಮಟ್ಟದ ಮಹಿಳಾ ಘಟಕದ ಕಾರ್ಯಕಾರಿಣಿ ಸದಸ್ಯರಾಗಿ ನಗರದ ಶ್ರೀಮತಿ ಮಮತಾ ಎಂ.ಬಾವಿಕಟ್ಟಿ ನೇಮಕಗೊಂಡಿದ್ದಾರೆ.
ಹರಿಹರ ತಾಲ್ಲೂಕು ಎರೆಹೊಸಹಳ್ಳಿಯಲ್ಲಿ ರುವ ಹೇಮ ವೇಮ ರೆಡ್ಡಿ ಗುರುಪೀಠದಲ್ಲಿ ಮೊನ್ನೆ ನಡೆದ ಸರಳ ಕಾರ್ಯಕ್ರಮದಲ್ಲಿ ಗುರುಪೀಠದ ಶ್ರೀ ವೇಮಾನಂದ ಗುರುಗಳ ಸಾನ್ನಿಧ್ಯದಲ್ಲಿ ಒಕ್ಕೂಟದ ಅಧ್ಯಕ್ಷ ಮೇಜರ್ ಎನ್. ರಘುರಾಮರೆಡ್ಡಿ ಅವರು ಮಮತಾ ಅವರಿಗೆ ನೇಮಕಾತಿ ಪತ್ರ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಗುರುನಾಥ ರೆಡ್ಡಿ, ಬಿ.ಎಂ.ಪಾಟೀಲ್, ರಮೇಶ್ ಬಗಲಿ, ಹರ್ಷಾ ಪಾಟೀಲ್, ಸುನೀಲ್‌ರೆಡ್ಡಿ ಬಾಂಡರಾವಿ, ಮಲ್ಲಿಕಾರ್ಜುನ್ ಬಾವಿಕಟ್ಟಿ, ಮನೋಜ್, ಶಂಕರ್ ಎಡ್ಡಿ ಬಾಗಲಕೋಟೆ, ಹೆಚ್.ಪಿ. ದೇವರಾಜ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.