ದಾವಣಗೆರೆ, ಆ.9- ಯುಜಿಸಿ ಸ್ಟಾರ್ಟ್ ಆಪ್ ಗ್ರ್ಯಾಂಟ್‌ಗೆ ದಾವಣಗೆರೆ ವಿಶ್ವ ವಿದ್ಯಾಲಯದ ಮೂವರು ಬೋಧಕ ಸಿಬ್ಬಂದಿ ಆಯ್ಕೆ ಯಾಗಿದ್ದಾರೆ. ಭೌತ ವಿಜ್ಞಾನ ವಿಭಾಗದ ಡಾ. ಜಿ.ಡಿ. ಪ್ರಸನ್ನ, ಜೈವಿಕ ತಂತ್ರಜ್ಞಾನ ವಿಭಾಗದ ಡಾ. ಎಸ್. ಚಂದ್ರ ಶೇಖರ್, ಪ್ರಾಣಿ ವಿಜ್ಞಾನ ವಿಭಾಗದ ಡಾ. ಅಂಬರೀಶ್ ಚಬ್ಬಿ ಆಯ್ಕೆಯಾಗಿದ್ದಾರೆ. ಇವರಿಗೆ ತಲಾ 10 ಲಕ್ಷ ಯುಜಿಸಿ ಅನುದಾನ ಸಿಗಲಿದೆ. ಭಾರತದ 34 ಮಂದಿ ಈ ಅನುದಾನಕ್ಕೆ ಆಯ್ಕೆಯಾಗಿದ್ದು, ರಾಜ್ಯದಲ್ಲೇ ದಾವಣಗೆರೆ ವಿವಿಯಿಂದ ಈ ಮೂವರು ಆಯ್ಕೆಯಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಬಣಕಾರ್ ತಿಳಿಸಿದ್ದಾರೆ.
January 1, 2025