ದಾವಣಗೆರೆ,ಆ.2-ಲಯನ್ಸ್ ಕ್ಲಬ್ ದಾವಣಗೆೆರೆ ವಿದ್ಯಾನಗರ ಸಂಸ್ಥೆಗೆ ನೂತನ ಸಾಲಿನ ಅಧ್ಯಕ್ಷರಾಗಿ ಡಾ. ಜಿ.ಎನ್. ಹೆಚ್. ಕುಮಾರ್, ಕಾರ್ಯದರ್ಶಿಯಾಗಿ ಸಿ.ಹೆಚ್. ದೇವರಾಜ್, ಖಜಾಂಚಿಯಾಗಿ ಎಂ.ಎಂ. ಸುದರ್ಶನ್ ಕುಮಾರ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಳೆ ದಿನಾಂಕ 3ರ ಸೋಮವಾರ ಮಧ್ಯಾಹ್ನ 12ಕ್ಕೆ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಜಿಲ್ಲಾ ಲಯನ್ಸ್ ಉಪ ರಾಜ್ಯಪಾಲ ಕೆ.ಸಿ. ವೀರಭದ್ರ ಅವರು ನೂತನ ಪದಾಧಿಕಾರಿಗಳನ್ನು ಪ್ರತಿಷ್ಠಾಪಿಸುವರು.