ದಾವಣಗೆರೆ, ಜು.31- ದಾವಣಗೆರೆ ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಸಮುದಾಯಗಳ ಜಿಲ್ಲಾ ಅನುಷ್ಠಾನ ಸಮಿತಿಗೆ ಆನಂದಪ್ಪ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರದ ವತಿಯಿಂದ ನೇಮಕ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಜಿಲ್ಲಾಧ್ಯಕ್ಷೆ ಕೆ.ಜಿ. ಮಂಜುನಾಥ್ ತಿಳಿಸಿದ್ದಾರೆ.
ಹರಿಹರದ ಭಜರಂಗ, ಪ್ರಿಯಾಂಕ, ಪಿ. ಪ್ರವೀಣ್, ಎಸ್. ಸುರೇಶ್ ಅವರನ್ನು ಅಲೆಮಾರಿ ಸಮುದಾಯಗಳ ಸೇವೆ ಮಾಡಲು ನಾಮ ನಿರ್ದೇಶನ ಮಾಡಲಾಗಿದೆ.