ಹಾವೇರಿ ಜಿ.ಪಂ. ಅಧ್ಯಕ್ಷರಾಗಿ ಏಕನಾಥ ಭಾನುವಳ್ಳಿ ಅವಿರೋಧ ಆಯ್ಕೆ

ಹಾವೇರಿ ಜಿ.ಪಂ. ಅಧ್ಯಕ್ಷರಾಗಿ ಏಕನಾಥ ಭಾನುವಳ್ಳಿ ಅವಿರೋಧ ಆಯ್ಕೆ - Janathavaniರಾಣೇಬೆನ್ನೂರು, ಅ. 22- ತಾಲ್ಲೂಕಿನ ಕಾಕೋಳ ಕ್ಷೇತ್ರದ ಜಿ.ಪಂ. ಸದಸ್ಯ ಏಕನಾಥ ಭಾನುವಳ್ಳಿ ಅವರು ಇಂದು ಹಾವೇರಿ ಜಿಲ್ಲಾ ಪಂಚಾಯ್ತಿ  ಕೊನೆಯ 5 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಹಾಲಿ ಅಧ್ಯಕ್ಷ ಶಿಗ್ಗಾಂವಿಯ ಬಸನಗೌಡ  ದೇಸಾಯಿ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು.

ಮಾಜಿ ಉಪಸಭಾಪತಿ ಮನೋಹರ ತಹಶೀಲ್ದಾರ್ ಅವರ ಸುಪುತ್ರ  ರಾಘವೇಂದ್ರ ತಹಶೀಲ್ದಾರ್ ಪ್ರಬಲ ಆಕಾಂಕ್ಷಿ ಆಗಿದ್ದರು. ಹಾನಗಲ್ಲ ವಿಧಾನಸಭೆ ಟಿಕೆಟ್ಟನ್ನು ತಹಶೀಲ್ದಾರರಿಗೆ ತಪ್ಪಿಸಿದ್ದ ಶ್ರೀನಿವಾಸ ಮಾನೆ ಅವರು ರಾಘವೇಂದ್ರ  ಪರವಾಗಿ ಬ್ಯಾಟಿಂಗ್ ಮಾಡಿದ್ದರಿಂದ ಅಧ್ಯಕ್ಷರ ಆಯ್ಕೆಯ ಕಸರತ್ತು ಕೆಪಿಸಿಸಿ ಅಂಗಳಕ್ಕೆ ಸ್ಥಳಾಂತರಗೊಂಡಿತ್ತು.

ಕೆಪಿಸಿಸಿ ಕಳಿಸಿದ ವೀಕ್ಷಕರಾದ ಬಿ.ಎಸ್. ಪಾಟೀಲ, ಸದಾನಂದ ಡಂಗನವರ ಹಾಗೂ ವೆಂಕಟೇಶ  ಸೇರಿದಂತೆ, ಜಿಲ್ಲೆಯ ಮುಖಂಡರುಗಳಾದ ಮಾಜಿ ಸ್ಪೀಕರ್ ಕೆ. ಬಿ.ಕೋಳಿವಾಡ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಅವರುಗಳು ನಿನ್ನೆ ಹಾವೇರಿಯ ಸಜ್ಜನರ ಹಾಲ್‌ನಲ್ಲಿ ಸಭೆ ನಡೆಸಿ ಏಕನಾಥ ಭಾನುವಳ್ಳಿ ಅವರ ಹೆಸರು ಅಂತಿಮಗೊಳಿಸಿದರು.

error: Content is protected !!