ಮಲೇಬೆನ್ನೂರು, ಡಿ.29- ಜಿಗಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್ ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಜಿ.ಬೇವಿನಹಳ್ಳಿಯ ಪಿ.ಹೆಚ್.ದೇವರಾಜ್ ಅವರು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಜಿ.ಬೇವಿನಹಳ್ಳಿಯ ಶ್ರೀಮತಿ ಆಶಾ ಅಣ್ಣಪ್ಪ ಮತ್ತು ಜಿಗಳಿಯ ಎಂ.ಎಸ್.ಮಲ್ಲನಗೌಡ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳು ತೆರವಾಗಿದ್ದವು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರೇಣುಕಾ ಪೂಜಾರ್ ನಾಗರಾಜ್ ಅವರು 11 ಮತಗಳನ್ನು ಪಡೆದು ಆಯ್ಕೆಯಾದರೆ, ಶ್ರೀಮತಿ ಮಂಜುಳಾ ಪರಮೇಶ್ವರಪ್ಪ ಅವರು 5 ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಿ.ಹೆಚ್.ದೇವರಾಜ್ 9 ಮತಗಳನ್ನು ಪಡೆದು ಆಯ್ಕೆಯಾದರೆ, ಎನ್.ಎಂ.ಪಾಟೀಲ್ ಅವರು 7 ಮತಗಳನ್ನು ಪಡೆದು ಪರಾಭವಗೊಂಡರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಚಲಾಯಿಸಿದ 17 ಮತಗಳ ಪೈಕಿ 1 ಮತ ತಿರಸ್ಕೃತಗೊಂಡಿತು. ಗ್ರಾ.ಪಂ. ಸದಸ್ಯ ವೈ.ಆರ್.ಚೇತನ್ಕುಮಾರ್ ಗೈರು ಹಾಜರಾಗಿದ್ದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾದ ಶ್ರೀಮತಿ ರೇಖಾ ಅವರು ಚುನಾವಣಾಧಿಕಾರಿ ಯಾಗಿದ್ದರು. ತೋಟಗಾರಿಕೆ ಇಲಾಖೆಯ ಪ್ರಕಾಶ್, ಪಿಡಿಒ ಉಮೇಶ್, ಕಾರ್ಯದರ್ಶಿ ಶೇಖರ್ ನಾಯ್ಕ, ಬಿಲ್ ಕಲೆಕ್ಟರ್ ಮೌನೇಶ್ ಸಹಕರಿಸಿದರು.