ಹೊನ್ನಾಳಿ, ಮಾ.26- ಪಟ್ಟಣದ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ನ್ಯಾಮತಿಯ ಜೆ. ಶ್ರೀಕಾಂತ್ ಹಾಗೂ ಉಪಾಧ್ಯಕ್ಷರಾಗಿ ಕುಂದೂರಿನ ಎಸ್. ನಾಗರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಕೆ. ಎಂ. ಬಸವಲಿಂಗಪ್ಪ ಹಾಗೂ ಮಾಜಿ ಉಪಾಧ್ಯಕ್ಷೆ ಎಸ್.ಎಂ. ಶಕುಂತಲಾ, ಡಿ.ಎಸ್. ಪ್ರದೀಪ್ ನಿರ್ದೇಶಕರುಗಳಾದ ಎಂ.ಸಿ. ನಾಗೇಂದ್ರಪ್ಪ, ಎಂ.ಜಿ. ಬಸವರಾಜಪ್ಪ, ಕೆ. ಸಿದ್ದೇಶ್ವರಪ್ಪ, ಆರ್.ಸಿ. ಶಂಕರಗೌಡ, ಕೆ.ಎಸ್. ಶಿವಕುಮಾರ್, ಪಿ.ಬಿ. ಶೈಲೇಶ್, ಎಂ.ಆರ್. ವಿಕಾಸ್, ಕೆ.ಜಿ. ಮಂಜುಳಾ, ಕೃಷ್ಣಾನಾಯ್ಕ ಹಾಗೂ ಸೊಸೈಟಿಯ ಕಾರ್ಯದರ್ಶಿ ಎಚ್.ಎನ್. ರುದ್ರೇಶ್ ಉಪಸ್ಥಿತರಿದ್ದರು.