ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳ ನೇಮಕ

ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳ ನೇಮಕ - Janathavaniಹರಿಹರ ಮಾ. 23 – ನಗರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನೂತನವಾಗಿ ಹೆಚ್. ಮಂಜಾನಾಯ್ಕ, ರಾಜು ಐರಣಿ, ಮಂಜಣ್ಣ ಹೆಚ್. ನಲ್ಲಿ, ವೀರೇಶ್ ಆಚಾರ್, ರೂಪಾ ಕಾಟ್ವೆ, ಬೆಣ್ಣಿ ಸಿದ್ದಪ್ಪ ಅವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಇದ್ದಂತಹ ನಾಮ ನಿರ್ದೇಶನ ಸದಸ್ಯರು ಗಳ ಸದಸ್ಯತ್ವ ಸ್ಥಾನ ತಂತಾನೇ ರದ್ದಾಗುತ್ತದೆ ಎಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಕರ್ನಾಟಕ ಸರ್ಕಾರದ ಸಚಿವಾಲಯದಿಂದ ಆದೇಶ ಪತ್ರ ನೂತನ ನಾಮ ನಿರ್ದೇಶನ ಸದಸ್ಯರುಗಳಿಗೆ ಬಂದಿದೆ ಎಂದು ತಿಳಿದುಬಂದಿದೆ. ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅವರ ಶಿಫಾರಸ್ಸಿನ ಮೇರೆಗೆ ಸರ್ಕಾರ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳನ್ನು ನೇಮಕ ಮಾಡಿದೆ.

error: Content is protected !!