ಹೊನ್ನಾಳಿ, ಮಾ.22- ಮಾಜಿ ಸೈನಿಕ ರವೀಂದ್ರ ಕಾಳಭೈರವ ಅವರು ಹೊನ್ನಾಳಿ ಪೊಲೀಸ್ ಠಾಣೆಗೆ ಕ್ರೈಂ ಸಬ್ಇನ್ಸ್ಪೆಕ್ಟರ್ ಆಗಿ ಇದೇ ಪ್ರಥಮ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ.
ಧಾರವಾಡ ಜಿಲ್ಲೆಯ ಕರಡಿಗುಡ್ಡ ಗ್ರಾಮದ ಕಾಳಭೈರವ ಅವರು, ಆರ್ಮಡ್ ಕೋರ್ನಲ್ಲಿ 18 ವರ್ಷ ಸೇವೆ ಸಲ್ಲಿಸಿ 2017 ರಲ್ಲಿ ನಿವೃತ್ತಿ ಹೊಂದಿದರು.
2017 ರ ಜೂನ್ ತಿಂಗಳಲ್ಲಿ ಪಿಎಸ್ಐ ಪರೀಕ್ಷೆ ಬರೆದು ಡಿಸೆಂಬರ್ ತಿಂಗಳಲ್ಲಿ ಸಂದರ್ಶನ ಮುಗಿಸಿ 2018 ರ ಆಗಸ್ಟ್ ನಲ್ಲಿ ಪಿಎಸ್ಐ ಹುದ್ದೆಗೆ ನೇಮಕವಾದರು. ಹೊನ್ನಾಳಿ ಪೊಲೀಸ್ ಸ್ಟೇಷನ್ಗೆ ಇದು ನನ್ನ ಮೊದಲ ಪೋಸ್ಟಿಂಗ್ ಎಂದು ಹೆಮ್ಮೆಯಿಂದ ಹೇಳಿಕೊಂಡರು.