ಕುಣಿಬೆಳಕೆೆರೆ : ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

ಮಲೇಬೆನ್ನೂರು, ಮಾ 17 – ಕುಣಿಬೆಳಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಕೆ. ನಾಗರಾಜಪ್ಪ ಮತ್ತು ಉಪಾಧ್ಯಕ್ಷರಾಗಿ ಬಿ.ರೇವಣಸಿದ್ದಪ್ಪ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಅಭಿವೃದ್ದಿ ಅಧಿಕಾರಿ ಎನ್.ಜಿ. ರುದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ನಿರ್ದೇಶಕರಾದ ಚನ್ನಪ್ಪಗೌಡ್ರು, ಎಂ. ಮಲ್ಲೇಶಪ್ಪ, ಕಟಿಗೇರ ಬಸವರಾಜಪ್ಪ, ಬಿ. ಮಾನಾಚಾರಿ, ಕೆ.ಉಮಾಪತಿ, ಕೆ.ತಿಪ್ಪೇಶಪ್ಪ, ಶ್ರೀಮತಿ ಯಶೋದಮ್ಮ, ಶ್ರೀಮತಿ ಹಾಲಮ್ಮ, ಕೆ. ಚಿಕ್ಕಪ್ಪ, ಎಂ. ಗುಡ್ಡೆಪ್ಪ, ಕೆ.ಸಿದ್ದಪ್ಪ ಮತ್ತು ಗ್ರಾಮದ ಮುಖಂಡರು ಈ ವೇಳೆ ಹಾಜರಿದ್ದರು.

error: Content is protected !!