ದಾವಣಗೆರೆ, ಆ.1-ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕರಾಗಿ ಟಿ. ರವಿಕುಮಾರ್ ಆಯ್ಕೆ ಆಗಿದ್ದಾರೆ.
ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಪಾಂಡೋಮಟ್ಟಿ ಆರ್. ಪ್ರಭಾಕರ್, ವಿಶ್ವನಾಥ್ ಮೈಲಾಳ ಹೊಳೆಸಿರಿಗೆರೆ, ರಾಘವೇಂದ್ರ ಕಡೇಮನಿ ದಾವಣಗೆರೆ, ತಿಪ್ಪೇಸ್ವಾಮಿ ದಾವಣಗೆರೆ, ಸಂತೋಷ್ ಗುಡಿಮನೆ ಹರಿಹರ, ಕುಬೇರಪ್ಪ ಗೌರಿಪುರ ಜಗಳೂರು, ಮಲೇಬೆನ್ನೂರು ಪ್ರಕಾಶ್, ಸುರೇಶ್ ಹೆಚ್.ಕೆ. ಆರ್. ನಗರ, ಸುರೇಶ್ ತೆರೆದಹಳ್ಳಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಖಜಾಂಚಿಯಾಗಿ ಎಚ್. ಮಲ್ಲಿಕಾರ್ಜುನ್ ವಂದಾಲಿ, ಜಿಲ್ಲಾ ಕಾರ್ಯನಿರ್ವಾಹಕ ಸದಸ್ಯರಾಗಿ ಕೆಟಿಜೆ ನಗರ ಶಶಿಕುಮಾರ್, ಅಣ್ಣಪ್ಪ ಯರಗುಂಟೆ, ಸುರೇಶ್ ಎಸ್ಜೆಎಂ ನಗರ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಹರಿಹರ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಂಚಾಲಕ ಡಿ.ಆರ್. ಪಾಂಡುರಂಗಸ್ವಾಮಿ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಉಪಸ್ಥಿತಿಯಲ್ಲಿ ಆಯ್ಕೆ ನಡೆದಿದ್ದು, ಹರಿಹರ ತಾಲ್ಲೂಕು ಸಂಚಾಲಕ ಶ್ರೀನಿವಾಸ, ಅಣ್ಣಪ್ಪ ಪೂಜಾರ, ಗಂಗನರಸಿ ಕರಿಬಸಪ್ಪ ಇನ್ನಿತರೆ ದಲಿತ ಕಾರ್ಯಕರ್ತರು ಉಪಸ್ಥಿತರಿದ್ದರು.