ದಾವಣಗೆರೆ, ಮಾ.14 – ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ದಾವಣಗೆರೆ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಆವರಗೊಳ್ಳದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಯೋಗಪ್ರಿಯ ವೈ.ಎ. ಪ್ರಥಮ ಸ್ಥಾನ ಪಡೆದು ರೂ 10000 ಸಾವಿರ ನಗದು ಬಹಮಾನದೊಂದಿಗೆ ರಾಜ್ಯ ಬಾಲ ವಿಜ್ಞಾನಿಯಾಗಿ ಆಯ್ಕೆಗೊಂಡಿರುತ್ತಾನೆ.
ರಾಜ್ಯ ವಿಜ್ಞಾನ ಪರಿಷತ್ ಗೌರವಾಧ್ಯಕ್ಷರಾದ ಪ್ರೊ.ವೈ.ವೃಷಭೇಂದ್ರಪ್ಪ, ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಅಂಗಡಿ ಸಂಗಮೇಶ್, ದಾವಣಗೆರೆ ಜಿಲ್ಲಾ ಉಸ್ತುವಾರಿ ಇ.ಸಿ.ಸದಸ್ಯ ಹೆಚ್.ಎಸ್.ಟಿ.ಸ್ವಾಮಿ, ಹೆಚ್.ಚಂದ್ರಪ್ಪ, ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ.ವಸಂತಕುಮಾರಿ ಅಭಿನಂದಿಸಿರುತ್ತಾರೆ
ಡಾ.ಸಿದ್ದಪ್ಪ ಕಕ್ಕಳಮೇಲಿ ಪ್ರಾಧ್ಯಾಪಕರು, ಸಸ್ಯಶಾಸ್ತ್ರ ಅಧ್ಯಯನ ವಿಭಾಗ ದಾವಣಗೆರೆ ಇವರು ಜಿಲ್ಲಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.