ಹರಪನಹಳ್ಳಿ, ಮಾ.11- ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ. ಕುಲುಮಿ ಅಬ್ದುಲ್ಲಾ ಅವರು ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.
ಟಿಎಪಿಸಿಎಂಎಸ್ ನಿಂದ ಎಪಿಎಂಸಿಗೆ ಆಯ್ಕೆ ಯಾಗಬೇಕಾದ ಒಂದು ಸ್ಥಾನಕ್ಕೆ ಕುಲುಮಿ ಅಬ್ದುಲ್ಲಾ, ಯು. ಹನುಮಂತಪ್ಪ ಸ್ಪರ್ಧಿಸಿದ್ದರು. ಅದರಲ್ಲಿ ಕುಲುಮಿ ಅಬ್ದುಲ್ಲಾ 9 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಒಟ್ಟು 15 ನಿರ್ದೇಶಕರಲ್ಲಿ ಒಬ್ಬ ಗೈರಾಗಿದ್ದು, ಉಳಿದ 14 ಜನರು ಮತದಾನದಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಎಲ್.ಎಂ. ನಂದೀಶ್ ಚುನಾವಣಾಧಿಕಾರಿಯಾಗಿದ್ದರು.