ಹರಪನಹಳ್ಳಿ, ಮಾ.9- ಹರಪನಹಳ್ಳಿ ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷರಾಗಿ ಬಾಗಳಿ ಗ್ರಾಮದ ಖ್ಯಾತ ನಾಟಿ ವೈದ್ಯ ಬಡಮ್ಮನವರ ಹೊಸೂರಪ್ಪ ಹಾಗೂ ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕ ಶಿವಾನಂದಪ್ಪ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಬಾಗಳಿ ಗ್ರಾಮದ ಬಡಮ್ಮನವರ ಕೆಂಚಪ್ಪ ಸಮುದಾಯ ಭವನದಲ್ಲಿ ಜರುಗಿದ ಗಂಗಾಮತ ಸಮಾಜ ಬಾಂಧವರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಮಾಜದ ಮುಖಂಡ ಮೇಘರಾಜ್ ಆಯ್ಕೆ ಪ್ರಸ್ತಾವನೆ ಮಂಡಿಸಿದಾಗ ಸಭೆ ಅನುಮೋದನೆ ನೀಡಿತು.
ಪ್ರೊ. ಎಂ. ತಿಮ್ಮಪ್ಪ ಮಾತನಾಡಿ, ಸಂಘಟನೆಯ ವಿಚಾರದಲ್ಲಿ ಕಾಲೆಳೆಯುವ ಪ್ರವೃತ್ತಿ ಬಿಟ್ಟು ಬೆನ್ನು ಚಪ್ಪರಿಸಿ ಅಭಿವೃದ್ಧಿಗೆ ಸಹಕರಿಸಬೇಕು. ಹಿಂದುಳಿದ ಸಮಾಜಕ್ಕೆ ಎಸ್ಟಿ ಮೀಸಲಾತಿ ಅಗತ್ಯವಿದೆ ಎಂದು ಹೇಳಿದರು.
ನೂತನ ಅಧ್ಯಕ್ಷ ಹೊಸೂರಪ್ಪ ಮಾತನಾಡಿ, ನಮ್ಮ ಸಮಾಜ ಬಹಳಷ್ಟು ಹಿಂದುಳಿದಿದೆ, ನೀವು ನೀಡಿರುವ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಳ್ಳದೆ ಎಲ್ಲರ ವಿಶ್ವಾಸ ತೆಗೆದುಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ ಎಂದು ನುಡಿದರು.
ನಿರ್ಗಮಿತ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಾದ ಕೋಳಿ ಮಂಜುನಾಥ, ರವಿಕುಮಾರ, ಅಣಜಿಗೇರಿ ನಿಂಗಪ್ಪ, ಬಡಮ್ಮನವರ ಭೀಮಪ್ಪ, ಬಿ. ರಾಂ ಪ್ರಸಾದ್ ಗಾಂಧಿ, ಬಿ. ರಾಜಶೇಖರ, ಗ್ರಾ.ಪಂ. ಸದಸ್ಯೆ ಹಾಲಮ್ಮ, ಹೇಮಣ್ಣ ಮೋರಿಗೇರಿ, ಹರಿಯಮ್ಮನಹಳ್ಳಿ ಮಂಜುನಾಥ, ಚಂದ್ರಮೌಳಿ, ಚಿಗಟೇರಿ ಸುರೇಶ, ಪಕ್ಕೀರಪ್ಪ, ಎನ್. ರವಿ, ಅಗ್ರಹಾರ ಶಿವು ಇನ್ನಿತರರಿದ್ದರು.