ದಾವಣಗೆರೆ, ಜು.25- ಲಯನ್ಸ್ ಕ್ಲಬ್ ನೇಸರದ ನೂತನ ಅಧ್ಯಕ್ಷರಾಗಿ ಶ್ರೀಮತಿ ಶ್ರೀಲಕ್ಷ್ಮಿ ವೈ.ಬಿ.ಸತೀಶ್, ಕಾರ್ಯದರ್ಶಿಯಾಗಿ ಶ್ರೀಮತಿ ಅನಿತಾ ಶಿವಾನಂದ್, ಖಜಾಂಚಿಯಾಗಿ ಶ್ರೀಮತಿ ರೇಣುಕಾ ಉದಯಕುಮಾರ್, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸೌಮ್ಯ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಟೇಮರ್ ಆಗಿ ಶ್ರೀಮತಿ ಭಾಗ್ಯಶ್ರೀ ಮಂಜುನಾಥ್, ಟೈಲ್ ಟ್ವಿಸ್ಟರ್ ಆಗಿ ಶ್ರೀಮತಿ ಲೀಲಾ ಎಸ್.ಓಂಕಾರಪ್ಪ, ನಿರ್ದೇಶಕರುಗಳಾಗಿ ಶ್ರೀಮತಿ ಪ್ರಭಾ ರವೀಂದ್ರ, ಶ್ರೀಮತಿ ಸುಶೀಲ ಎಸ್.ಸಿ.ಹುಲ್ಲತ್ತಿ, ಶ್ರೀಮತಿ ಪದ್ಮಾ ಡಾ.ಬಿ.ಎಸ್.ನಾಗಪ್ರಕಾಶ್, ಶ್ರೀಮತಿ ಶ್ವೇತಾ ದೇವರಮನಿ ನಾಗರಾಜ್, ಶ್ರೀಮತಿ ಲತಾ ಬೆಳ್ಳೂಡಿ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಳೆ ದಿನಾಂಕ 26 ರ ಸೋಮವಾರ ಸಂಜೆ 4.30 ಕ್ಕೆ ಲಯನ್ಸ್ ಭವನದಲ್ಲಿ ನಡೆಯಲಿದೆ.
ಜಿಲ್ಲಾ ಲಯನ್ಸ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರಾದ ಶ್ರೀಮತಿ ವಿದ್ಯಾಲತಾ ವಿ. ಶೆಟ್ಟಿ ಅವರು ನೂತನ ಪದಾಧಿಕಾರಿಗಳನ್ನು ಪ್ರತಿಷ್ಠಾಪಿಸುವರು. ಜಿಲ್ಲಾ ಲಯನ್ಸ್ ವಿಶ್ರಾಂತ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವರು. ಇ.ಎಂ. ಮಂಜುನಾಥ, ಎಸ್. ವೆಂಕಟಾಚಲಂ, ಎಸ್. ಓಂಕಾರಪ್ಪ, ಬೆಳ್ಳೂಡಿ ಶಿವಕುಮಾರ್,
ವೈ.ಬಿ. ಸತೀಶ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳವರು.