ದಾವಣಗೆರೆ, ಮೇ 1- ಮೇ 2ರಂದು ಅಧಿಕಾರವಧಿ ಮುಕ್ತಾಯ ಗೊಳ್ಳಲಿರುವ ದಾವಣಗೆರೆ ಜಿಲ್ಲಾ ಪಂಚಾಯ್ತಿಗೆ ಆಡಳಿತಾಧಿಕಾರಿ ಯನ್ನಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ವಿವಿಧ ದಿನಾಂಕಗಳಂದು ಅಧಿಕಾರವಧಿ ಮುಕ್ತಾಯಗೊಳ್ಳುವ ಜಿಲ್ಲೆಯ ತಾಲ್ಲೂಕು ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯನ್ನಾಗಿ ಜಿ.ಪಂ. ಉಪ ಕಾರ್ಯದರ್ಶಿ ಅಥವಾ ಆ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿಗಳನ್ನು ನೇಮಿಸಲು ಪ್ರಾದೇಶಿಕ ಆಯುಕ್ತರಿಗೆ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದೆ. ದಾವಣಗೆರೆ ತಾ.ಪಂ. ಅಧಿಕಾರವಧಿಯು ಮೇ 15ರಂದು, ಹರಿಹರ ತಾ.ಪಂ. ಮೇ 11, ಚನ್ನಗಿರಿ ತಾಪಂ. ಮೇ 9ರಂದು, ಹೊನ್ನಾಳಿ ಮತ್ತು ನ್ಯಾಮತಿ ತಾ.ಪಂ. ಮೇ 12ರಂದು, ಜಗಳೂರು ತಾ.ಪಂ. ಅಧಿಕಾರವಧಿಯು ಜು. 1ರಂದು ಮುಕ್ತಾಯಗೊಳ್ಳಲಿದೆ.