ಕೊಟ್ಟೂರು. ಫೆ.25 – ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗುಡೇಕೋಟೆ ಸಾಮಾನ್ಯ ಕೃಷಿಕ ಕ್ಷೇತ್ರಕ್ಕೆ ಬಸವರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುದುರೆಡೆವು ಪರಮೇಶ್ವರಪ್ಪ ಇವರ ನಿಧನದಿಂದ ತೆರವಾಗಿದ್ದ ಗುಡೆಕೋಟೆ ಕ್ಷೇತ್ರಕ್ಕೆ ಬಸವರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾಗಿದ್ದ ತಹಶೀಲ್ದಾರ್ ಜಿ. ಅನಿಲ್ಕುಮಾರ್ ಅವರು ಆಯ್ಕೆಯನ್ನು ಘೋಷಿಸಿದರು.
December 26, 2024