ದಾವಣಗೆರೆ, ಫೆ.17- ಜಗಳೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕೆಚ್ಚೇನಹಳ್ಳಿಯ ಕೆ.ಬಿ.ಸಿದ್ದೇಶ್ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕಿನಲ್ಲಿ ಇಂದು ನಡೆದ ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಬಿ.ಸಿದ್ದೇಶ್ ಇವರ ಒಂದು ನಾಮಪತ್ರ ಮಾತ್ರ ಸ್ವೀಕಾರವಾದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸಿ. ಗೋಪಾಲ್ ಘೋಷಿಸಿದರು.
ಈ ವೇಳೆ ನೂತನ ಅಧ್ಯಕ್ಷರು ಮಾತನಾಡಿ, ಬ್ಯಾಂಕಿನ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿ, ಹಾಲಿ ಬಡ್ಡಿ ಮನ್ನಾ ಯೋಜನೆಯಲ್ಲಿ ಉತ್ತಮ ವಸೂಲಾತಿಯಾಗಿದ್ದು, ಸುಸ್ತಿ ಹೊಂದಿರುವ ಸಾಲಗಾರರು ಶೀಘ್ರ ಸಾಲದ ಮೊತ್ತ ಪಾವತಿಸಿ, ಹೊಸದಾಗಿ ಶೇ. 3 ರ ಬಡ್ಡಿ ದರದಲ್ಲಿ ಸಾಲ ಪಡೆಯಲು ಹಾಗೂ ಚಾಲ್ತಿ ಕಂತಿನ ಸಾಲಗಾರರು ನಿಗದಿತ ಅವಧಿಯೊಳಗೆ ಕಂತಿನ ಮೊತ್ತ ಪಾವತಿಸಿ ಸರ್ಕಾರದ ಬಡ್ಡಿ ರಿಯಾಯಿತಿ ಪಡೆಯಲು ಮನವಿ ಮಾಡಿದರು.
ಬ್ಯಾಂಕಿನ ಮುಂಭಾಗದಲ್ಲಿ ನೂತನ ಮಳಿಗೆ ನಿರ್ಮಿಸಲು ಹಾಗೂ ಶಾಸಕರ ಹಾಗೂ ಸಂಸದರ ಅನುದಾನದಲ್ಲಿ ಕಟ್ಟಡ ಹಾಗೂ ಶೌಚಾಲಯ ನಿರ್ಮಿಸಲು ಪ್ರಯತ್ನಿಸುವುದಾಗಿ ತಿಳಿಸುತ್ತಾ ಎಲ್ಲಾ ನಿರ್ದೇಶಕರಿಗೂ ಬ್ಯಾಂಕಿನ ಸದಸ್ಯರಿಗೂ ಕೃತಜ್ಞತೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಜಗಳೂರು ಪಿಕಾ ರ್ಡ್ ಬ್ಯಾಂಕಿನ ಉಪಾಧ್ಯಕ್ಷರಾದ ಚೌಡಮ್ಮ, ನಿರ್ದೇಶಕರುಗಳಾದ ಜೆ.ಎಸ್. ಮಲ್ಲಿಕಾ ರ್ಜುನ, ಬಿ.ಡಿ. ಹನುಮಂತ ರೆಡ್ಡಿ, ಪಿ.ಎಸ್. ಮಂಜಣ್ಣ, ಎಂ.ಟಿ. ಧನಂಜಯರೆಡ್ಡಿ, ಎಂ.ವಿ. ರಾಜ್ ಹಾಗೂ ಟಿ.ಎಂ. ಪುಷ್ಪ, ಚನ್ನಬಸಪ್ಪ, ಸಿದ್ದೇಶ್, ಸೈಯದ್ ಕಲಿಂ, ಕೆ.ಜಿ. ಲೋಲಾಕ್ಷಿ, ಕೆ.ಹೆಚ್. ಮಂಜಪ್ಪ, ವ್ಯವಸ್ಥಾಪಕ ಟಿ.ಎನ್. ಭೂಷಣ್ ಹಾಜರಿದ್ದರು.