ಹೊನ್ನಾಳಿ, ಜು.6- ಸರ್ಕಾರಿ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ)ಯ ತಾಲ್ಲೂಕು ಅಧ್ಯಕ್ಷರಾಗಿ ಹುಣಸಘಟ್ಟ ಶಿವಲಿಂಗಪ್ಪ ಆಯ್ಕೆಯಾಗಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಕ್ಳ ಆಂಜನೇಯ ಅವರು ಶಿವಲಿಂಗಪ್ಪನವರ ಆಯ್ಕೆಯನ್ನು ಘೋಷಣೆ ಮಾಡಿದರು. ಕಾರ್ಯದರ್ಶಿಯಾಗಿ ಬನ್ನಿಕೋಡು ಸತೀಶ್, ಸಹಕಾರ್ಯದರ್ಶಿ ಕೋಟೆಮಲ್ಲೂರು ರಮೇಶ್, ಉಪಾಧ್ಯಕ್ಷರಾಗಿ ಕೆಂಗಲಹಳ್ಳಿ ಸುಧಾ, ಲಿಂಗಾಪುರ ಸಾವಿತ್ರಮ್ಮ ಅವರನ್ನು ನೇಮಕ ಮಾಡಲಾಯಿತು.
ಜಿಲ್ಲಾ ಪ್ರ. ಕಾರ್ಯದರ್ಶಿ ಹಾವನೂರು ನಿಂಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ರುದ್ರನಾಯಕ್ ಇದ್ದರು. ನ್ಯಾಮತಿ ತಾಲ್ಲೂಕು ಸಮಿತಿ ಆಯ್ಕೆ ಜವಾಬ್ದಾರಿಯ ಉಸ್ತುವಾರಿಗಳಾಗಿ ಚೀಲೂರು ಪಾರ್ವತಮ್ಮ, ಸುರಹೊನ್ನೆ ಬಿ.ವಿ. ರಾಜಶೇಖರ್ ಅವರನ್ನು ನೇಮಕ ಮಾಡಲಾಯಿತು.