ಹೊಳೆಸಿರಿಗೆರೆ ಗ್ರಾ.ಪಂ. ಅಧ್ಯಕ್ಷರಾಗಿ ಕಾವ್ಯ, ಉಪಾಧ್ಯಕ್ಷರಾಗಿ ಚಂದ್ರಕಲಾ

ಮಲೇಬೆನ್ನೂರು, ಫೆ.11- ಹೊಳೆಸಿರಿಗೆರೆ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಾವ್ಯ ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ಚಂದ್ರಕಲಾ ಜಯ್ಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿತ್ತು. ಪಿಡಬ್ಲ್ಯೂಡಿ ಎಇ ರವಿಕಿರಣ್ ಚುನಾವಣಾಧಿಕಾರಿಯಾಗಿದ್ದು, ಪಿಡಿಒ ಜಯಕುಮಾರ್ ಹಾಜರಿದ್ದರು. 

ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಹಿರಿಯ ಮುಖಂಡ ಎನ್.ಜಿ. ನಾಗನಗೌಡ್ರು, ಎಂ.ಜಿ. ಪರಮೇಶ್ವರಗೌಡ, ಎಂ. ರಾಮನಗೌಡ, ಕುಂದೂರು ಕುಮಾರ್ ಇನ್ನಿತರರು ಅಭಿನಂದಿಸಿದರು.

error: Content is protected !!