ಹೊನ್ನಾಳಿ, ಫೆ.11- ತಾಲ್ಲೂಕಿನ ಮುಕ್ತೇ ನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಪದ್ಮಶಾಲಿ ಸಮಾಜದ ಯಶೋಧ ಮಾಲ ತೇಶಪ್ಪ ಸೋಮಂತಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯಶೋಧ ಅವರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಜಯ ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ. ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು ಸಮಾಜದ ಬಂಧುಗಳು ಯಶೋಧ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಹನುಮಂತಪ್ಪ ಮುಕ್ತೇನಹಳ್ಳಿ, ನೀಲಪ್ಪ ಕುಮಾರಪ್ಪನವರ, ಪ್ರಕಾಶ ಅಗಡಿ, ಯಲ್ಲಪ್ಪ ಗುತ್ತಲ, ಮಾಲತೇಶ ಸೋಮಂತಪ್ಪನವರ, ಯೋಗೀಶ್ವರ ದಬ್ದೇಶಿ, ಕೊಟ್ರೇಶ್ ಸೋಮಂತಪ್ಪನವರ, ಬಸವರಾಜ್ ಸಂಗಾನವರ, ಗೋವಿಂದಪ್ಪ, ಮನೋಜಕುಮಾರ್, ರುದ್ರಮ್ಮ ಇನ್ನಿತರರು ಹಾಜರಿದ್ದರು.