ವಾಲ್ಮೀಕಿ ಜಾತ್ರೆಯಲ್ಲಿ ಗಮನ ಸೆಳೆದ ಸಾಂಸ್ಕೃತಿಕ ಉತ್ಸವ

ಮಲೇಬೆನ್ನೂರು,ಫೆ.11- ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಜರುಗಿದ 3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಚಳ್ಳಕೆರೆ ತಿಪ್ಪೇಸ್ವಾಮಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಕಲಾ ರಸಿಕರ ಮನ ತಣಿಸಿತು.

ಸಾಂಸ್ಕೃತಿಕ ಉತ್ಸವದಲ್ಲಿ ಕರ್ನಾಟಕ, ಅಸ್ಸಾಂ, ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶ, ಒರಿಸ್ಸಾ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಅಂತರ ರಾಷ್ಟ್ರೀಯ ಕಲಾವಿದರು ನಡೆಸಿಕೊಟ್ಟ ವಿಭಿನ್ನ ಬುಡಕಟ್ಟು ಶೈಲಿಯ ಸಾಂಪ್ರದಾಯಿಕ ನೃತ್ಯಗಳು ನೋಡುಗರ ಕಣ್ಮನ ಸೆಳೆದವು.

ಜಿ.ಪಂ. ಮಾಜಿ ಅಧ್ಯಕ್ಷರೂ, ಭಾರತೀಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರೂ ಆದ ಡಾ. ವೈ. ರಾಮಪ್ಪ ಉಸ್ತುವಾರಿಯಲ್ಲಿ ಏರ್ಪಾಡಾಗಿದ್ದ ಸಾಂಸ್ಕೃತಿಕ ಉತ್ಸವದ ಪ್ರಾಯೋಜಕತ್ವವನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ವಹಿಸಿದ್ದವು.

ಕಾರ್ಯಕ್ರಮದ ಸಂಯೋಜನಾಧಿಕಾರಿ ರವೀಂದ್ರ ಕುಮಾರ್, ಜಯಕುಮಾರ್ ಮತ್ತು ಸೆಂಥಿಲ್ ಸೆಲ್ವ ಅವರು ಹಾಜರಿದ್ದು ನಿರ್ದೇಶನ ನೀಡಿದರು. ರಾಷ್ಟ್ರಮಟ್ಟದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದ್ದರ ಕುರಿತು  ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಮುಂದಿನ ಜಾತ್ರೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಒಳಗೊಂಡ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ತಿಳಿಸಿದರು.  

ಶಾಸಕ ಎಸ್.ವಿ. ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‌ಪಿ ಹನುಮಂತರಾಯ, ತಹಶೀಲ್ದಾರ್ ರಾಮಚಂದ್ರಪ್ಪ, ಟಿಹೆಚ್‌ಒ ಡಾ. ಚಂದ್ರಮೋಹನ್, ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ್,  ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್, ಟಿ. ಈಶ್ವರ್, ಡಾ. ಎ.ಬಿ. ರಾಮಚಂದ್ರಪ್ಪ, ತ್ಯಾವಣಿಗಿ ಗೋವಿಂದಸ್ವಾಮಿ, ಎಂ. ನಾಗೇಂದ್ರಪ್ಪ, ಕೆಪಿಟಿಸಿಎಲ್ ಎಇಇ ಕೆ.ಎಸ್. ಜಯ್ಯಪ್ಪ, ಹರ್ತಿಕೋಟೆ ವೀರೇಂದ್ರ ಸಿಂಹ,  ಜಿಗಳಿ ಆನಂದಪ್ಪ, ಹೂವಿನಮಡು ಚನ್ನಬಸಪ್ಪ, ಪಿ.ಎಸ್. ಹನುಮಂತಪ್ಪ, ಜಿ. ಮಂಜುನಾಥ್ ಪಟೇಲ್, ತಳಸದ ಬಸವರಾಜ್, ಯಕ್ಕನಹಳ್ಳಿ ಬಸವರಾಜಪ್ಪ, ಎಸ್. ರಂಗಪ್ಪ  ಗಣ್ಯರು ಸೇರಿದಂತೆ ಸಾವಿರಾರು ಜನರು ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು.

ನಂತರ ಹಾಸನ ಜಿಲ್ಲೆಯ ವಾಲ್ಮೀಕಿ ಕಲಾಸಂಘದ ಕಲಾವಿದರು  ಅಭಿನಯಿಸಿದ §ಸಂಪೂರ್ಣ ರಾಮಾಯಣ¬ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

error: Content is protected !!