ದಾವಣಗೆರೆ, ಫೆ. 9 – ತಾಲ್ಲೂಕಿನ ಅಣಜಿ ಗ್ರಾಮ ಪಂಚಾಯಿತಿಗೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಶಶಿಕುಮಾರ್, ಉಪಾಧ್ಯಕ್ಷರಾಗಿ ಎನ್.ಬಿ. ಲೋಕೇಶ್ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅಣಜಿ ಗ್ರಾಮದ ಜ್ಯೋತಿ ಶಶಿಕುಮಾರ್ ಹಾಗೂ ಗಾಂಧಿನಗರದ ಶ್ರೀಮತಿ ಶಂಕ್ರಮ್ಮ ನಾಗರಾಜ್ ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಅಣಜಿ ಗ್ರಾಮದ ಎನ್.ಬಿ. ಲೋಕೇಶ್ ಹಾಗೂ ಮೆಳ್ಳೇಕಟ್ಟೆ ಗ್ರಾಮದ ಬಿ.ಕೆ. ಮಂಜುನಾಥ ಅವರು ನಾಮಪತ್ರ ಸಲ್ಲಿಸಿದ್ದರು. ತಲಾ 13 ಮತಗಳನ್ನು ಗಳಿಸುವ ಮೂಲಕ ಅಧ್ಯಕ್ಷರಾಗಿ ಜ್ಯೋತಿ ಶಶಿಕುಮಾರ್, ಉಪಾಧ್ಯಕ್ಷರಾಗಿ ಎನ್.ಬಿ. ಲೋಕೇಶ್ ಅವರುಗಳು ಚುನಾಯಿತರಾದರು.
ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಟಿ.ಆರ್. ಶಶಿಕಲಾ ಅವರು ಅಧ್ಯಕ್ಷ-ಉಪಾ ಧ್ಯಕ್ಷರುಗಳ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಣಜಿ ಎಸ್.ಕೆ. ಚಂದ್ರಶೇಖರ್, ಪಿ.ಎನ್. ಶಿವಪ್ರಕಾಶ್, ಸಂಗನಬಸಪ್ಪ, ಹೊನ್ನಪ್ಪ, ಬಸವಲಿಂಗಪ್ಪ, ಎನ್.ಕೆ. ಚನ್ನಪ್ಪ, ಎ.ಹೆಚ್. ಅಂಜಿನಪ್ಪ, ಕೆ. ನಾಗಪ್ಪ, ರಾಜಪ್ಪ, ನಾಗೇಂದ್ರಪ್ಪ, ಸಿದ್ದೇಶ್, ಎ.ಬಿ. ಚಂದ್ರಪ್ಪ, ಕೆ.ಪಿ. ರುದ್ರೇಶ್, ಮೆಳ್ಳೇಕಟ್ಟೆ ಶಿವನಗೌಡ್ರು, ಗುರುಬಸಪ್ಪ, ಡಿ.ಟಿ. ಹನುಮಂತಪ್ಪ, ದೇವರಾಜ್, ಸಿ.ಟಿ. ಕುಮಾರ, ಗೊಲ್ಲರಹಳ್ಳಿಯ ಶ್ರೀನಿವಾಸ್, ಈಶಪ್ಪ, ಶೇಖರಪ್ಪ, ತಿಮ್ಮಣ್ಣ, ಗಿರಿಯಾಪುರದ ಹನುಮಂತಪ್ಪ, ಅಂಜಿನಪ್ಪ, ರಂಗಸ್ವಾಮಿ, ಗಾಂಧಿನಗರದ ಜಯ್ಯಣ್ಣ, ನಾಗರಾಜ್, ಸಿದ್ದಣ್ಣ, ರೇವಣ್ಣ, ಚಂದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.