ಮಲೇಬೆನ್ನೂರು, ಫೆ. 10 – ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ನಂದಿಗುಡಿ ಗ್ರಾಮದ ಶ್ರೀಮತಿ ಕರಿಬಸಮ್ಮ ಬಸಪ್ಪ ಮತ್ತು ಉಪಾಧ್ಯಕ್ಷರಾಗಿ ಉಕ್ಕಡಗಾತ್ರಿಯ ಶ್ರೀಮತಿ ಸಾಕಮ್ಮ ದೇವೇಂದ್ರಪ್ಪ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಎಸ್ಸಿ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎಂ `ಎ’ ಮಳಿಗೆ ಮೀಸಲಾಗಿತ್ತು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಮಕೃಷ್ಣ ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಜಿ.ಆರ್. ಸುನೀಲ್ ಹಾಜರಿದ್ದರು.