ಮಲೇಬೆನ್ನೂರು, ಫೆ. 10 – ಕುಂಬಳೂರು ಗ್ರಾ.ಪಂ. ಅಧ್ಯಕ್ಷರಾಗಿ ಶ್ರೀಮತಿ ಲೀಲಾ ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ಎ.ಕೆ. ಹನುಮಂತಪ್ಪ ಅವರು ಸೋಮವಾರ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲೀಲಾ ಶಿವಕುಮಾರ್ 10 ಮತಗಳನ್ನು ಪಡೆದು ಆಯ್ಕೆಯಾದರೆ, ನಿಟ್ಟೂರಿನ ಶ್ರೀಮತಿ ವನಿತಾ ವಿಲಾಸ್ ಅವರು 8 ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎ.ಕೆ. ಹನುಮಂತಪ್ಪ 12 ಮತಗಳನ್ನು ಪಡೆದು ಆಯ್ಕೆಯಾದರೆ, ನಿಟ್ಟೂರಿನ ಶ್ರೀಮತಿ ಚಂದ್ರಮ್ಮ ಮಂಜಪ್ಪ ಅವರು 6 ಮತಗಳನ್ನು ಪಡೆದು ವಿಫಲರಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿತ್ತು.
ಎಪಿಎಂಸಿ ಕಾರ್ಯದರ್ಶಿ ವಿದ್ಯಾಶ್ರೀ ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಆರ್.ಕೆ. ಮೂರ್ತಿ ಹಾಜರಿದ್ದರು. ಅಂಗವಿಕಲ ಮಹಿಳೆ ಈ ಗ್ರಾ.ಪಂ.ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದೇ ಮೊದಲು.