ರಾಣೇಬೆನ್ನೂರು, ಏ. 14- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಮಂಡಳಿ ಉಪಾಧ್ಯಕ್ಷರನ್ನಾಗಿ ರಾಣೇಬೆನ್ನೂರಿನ ಬಿಜೆಪಿ ಮುಖಂಡ ಡಾ. ಬಸವರಾಜ ಕೇಲಗಾರ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ. ನಾಡಿದ್ದು ದಿನಾಂಕ 16ರಂದು ಡಾ. ಬಸವರಾಜ ಕೇಲಗಾರ ಅವರು ರಾಜ್ಯಪಾಲರ ಆದೇಶಾನುಸಾರ ನೇಮಕಾತಿಯ ಅಧಿಕಾರವನ್ನು ಹುಬ್ಬಳ್ಳಿಯ ಕೇಂದ್ರ ಕಛೇರಿಯಲ್ಲಿ ವಹಿಸಿಕೊಳ್ಳಲಿದ್ದಾರೆ.
April 15, 2025