ಮಾಯಕೊಂಡ, ಫೆ.9- ಇಲ್ಲಿಗೆ ಸಮೀಪದ ಕೊಡಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿದ್ದಪ್ಪ ಮತ್ತು ಉಪಾಧ್ಯಕ್ಷರಾಗಿ ಪುಷ್ಪಾ ಪ್ರಶಾಂತ್ ಅವಿರೋಧ ಆಯ್ಕೆಯಾಗಿದ್ದಾರೆ.
ಸತತ 4 ಬಾರಿ ಅಧ್ಯಕ್ಷರಾಗಿ ದಾಖಲೆ : ಎಸ್. ಸಿದ್ಧಪ್ಪ ಅವರು 1995, 2000 ಮತ್ತು 2005 ರಲ್ಲಿ ಸತತ 3 ಬಾರಿ ಕೊಡಗನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಯಾಗಿದ್ದರು. 2 ಬಾರಿ ಸಾಮಾನ್ಯ ವರ್ಗಕ್ಕೆ ಮೀಸ ಲಾತಿ ಘೋಷಣೆಯಾದಾಗಲೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿ ಪ್ರಾಬಲ್ಯ ಮೆರೆದಿದ್ದಾರೆ.
ಎಸ್ಸೆಸ್ ಸ್ಮರಣೆ: ಕೊರೊನಾ ಲಾಕ್ ಡೌನ್ ಕಾಲದಲ್ಲಿ ಕೊಡಗನೂರು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಪ್ರತಿ ಕುಟುಂಬಕ್ಕೂ ರೇಷನ್ ಕಿಟ್ ನೀಡಿದ್ದೆ. ಈ ಹಿಂದೆ 3 ಬಾರಿ ಅಧ್ಯಕ್ಷನಾಗಿದ್ದಾಗಲೂ ಕುಡಿಯುವ ನೀರು, ರಸ್ತೆ, ಚರಂಡಿ ವಿದ್ಯುತ್ ದೀಪದ ಸಮಸ್ಯೆ ನೀಗಲು ಸಾಕಷ್ಟು ಪ್ರಯತ್ನಿಸಿದ್ದೇನೆ. ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ತಮ್ಮ ಸಾಮಾಜಿಕ ಜೀವನದ ಎಲ್ಲಾ ಯಶಸ್ಸಿನ ರೂವಾರಿಗಳು ಎಂದು ಸಿದ್ದಪ್ಪ ಸ್ಮರಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮುಖಂಡರಾದ ಅಶೋಕ, ಶೇಖರಣ್ಣ, ರಾಜಶೇಖರ್, ದೇವೇಂದ್ರಪ್ಪ, ಶಿವಮೂರ್ತಿ, ಬಸವರಾಜ, ಜಗದೀಶ, ನವೀನ, ಬಸವರಾಜಣ್ಣ ಮತ್ತಿತರರು ಅಭಿನಂದಿಸಿದ್ದಾರೆ. ಸಿದ್ದಪ್ಪ ಅವರನ್ನು ಸನ್ಮಾನಿಸಲು ಅಭಿಮಾನಿಗಳ ದೊಡ್ಡ ದಂಡೇ ನೆರೆದು ನೂಕುನುಗ್ಗಲು ಉಂಟಾಗಿತ್ತು.