ಮಲೇಬೆನ್ನೂರು, ಏ.9- ಹರಿಹರ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ನಾಲ್ವರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸದಸ್ಯರಾಗಿ ಉಕ್ಕಡಗಾತ್ರಿಯ ದಾನಯ್ಯ, ಹರಳಹಳ್ಳಿಯ ಎ. ರಂಗನಾಥ್, ಹರಿಹರ ನಗರದ ಹೆಚ್.ಎಸ್. ಚನ್ನಬಸಪ್ಪ, ಕೆ.ಬೇವಿನಹಳ್ಳಿಯ ಶ್ರೀಮತಿ ವೀರಮ್ಮ ಕೋಂ ಡಿ.ಹೆಚ್. ಶಿವಪ್ರಕಾಶ್ ಅವರನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ಸ್ವಾಮಿ ಅವರ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ. ಭೂ ನ್ಯಾಯ ಮಂಡಳಿಗೆ ಅಧ್ಯಕ್ಷರಾಗಿ ದಾವಣಗೆರೆ ಉಪವಿಭಾಗಾಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಹರಿಹರ ತಹಶೀಲ್ದಾರ್ ಅವರು ಕಾರ್ಯನಿರ್ವಹಿಸಲಿದ್ದಾರೆ.