ಹರಪನಹಳ್ಳಿ, ಫೆ.7 – ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಶನಿವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ.ರಾಜಶೇಖರ್ ಒಟ್ಟು 21 ಸದಸ್ಯರ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಂ.ಕೊಟ್ರಯ್ಯ ತಿಳಿಸಿದ್ದಾರೆ.
ಪಟ್ಟಣದ ಆರ್.ಎಸ್.ಎನ್ ಶಾಲೆಯಲ್ಲಿ ಫೆ.6 ರಂದು ನಾಮಪತ್ರಗಳನ್ನು ವಾಪಸ್ಸು ಪಡೆಯುವ ದಿನಾಂಕವಾಗಿತ್ತು. ಈ ವೇಳೆ ಸಲ್ಲಿಸಿದ ಎಲ್ಲಾ ನಾಮಪತ್ರಗಳು ಸರಿಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಎಂ.ರಾಜಶೇಖರ್ ನಾಮಪತ್ರ ಸಲ್ಲಿಸಿದ್ದು, ಉಳಿದಂತೆ 7 ಜನ ಮಹಿಳೆಯರು ಒಳಗೊಂಡು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸದಸ್ಯರು : ಎಂ.ರಾಜಶೇಖರ್ ಅಧ್ಯಕ್ಷರು, ಟಿ.ಎಚ್.ಎಂ.ಮಲ್ಲಿಕಾರ್ಜುನ್, ಅಂಬ್ಲಿ ಮಂಜುನಾಥ, ಗಂಗಾಧರ್ ಗುರುಮಠ, ಎನ್.ಕೊಟ್ರೇಶ್, ಎಂ.ಟಿ.ಬಸವನಗೌಡ, ಕೆ.ಎಂ.ಗುರುಸಿದ್ದಯ್ಯ, ಮಟ್ಟಿ ಮೃತ್ಯುಂಜಯ, ಗೊಂಗಡಿ ನಾಗರಾಜ್, ಪಿ.ಬಸವರಾಜ್, ಪಿ.ರುದ್ರಪ್ಪ, ಕೆ.ಪ್ರಭಾಕರ್, ಪಿ.ಕರಿಬಸಪ್ಪ, ಬಸವರಾಜ್ ಮುಲಾಲಿ, ಜಿ.ಸಿ.ಪ್ರಭಾ ಅಜ್ಜಣ್ಣ, ಕೆ.ಪುಷ್ಪಾ ದಿವಾಕರ್, ಎ.ಎಂ.ಪದ್ಮಾವತಿ, ಜಿ.ಅಕ್ಕಮಹಾದೇವಿ, ಎಂ.ಶೋಭಾ ಚಂದ್ರಶೇಖರ್, ಕೆ.ಎಂ.ಉಮಾದೇವಿ, ಬಿ.ಎನ್.ವೀಣಾ ಆಯ್ಕೆಯಾದ ಸದಸ್ಯರು.
ಈ ಸಂದರ್ಭದಲ್ಲಿ ಎಂ.ರಾಜಶೇಖರ್, ಟಿ.ಎಚ್.ಎಂ.ಮಲ್ಲಿಕಾರ್ಜುನ್, ಮಟ್ಟಿ ಮೃತ್ಯುಂಜಯ, ಎಚ್.ಮಲ್ಲಿಕಾರ್ಜುನ್, ಕಾನಹಳ್ಳಿ ರುದ್ರಪ್ಪ, ಬಸವರಾಜ್, ಎಂ.ಅಜ್ಜಣ್ಣ, ಅಂಬ್ಲಿ ಮಂಜುನಾಥ್, ಪ್ರಭಾ ಅಜ್ಜಣ್ಣ, ಮಂಜುಳಾ, ಎಂ.ಶೋಭ, ವೀಣಾ, ಪದ್ಮಾವತಿ, ಉಪಸ್ಥಿತರಿದ್ದರು.