ಮಲೇಬೆನ್ನೂರು, ಜ.28- ಇಲ್ಲಿನ ಪುರಸಭೆಯ ಆಶ್ರಯ ಸಮಿತಿಗೆ ಸರ್ಕಾರದ ನಾಮ ನಿರ್ದೇಶಿತ ಸದಸ್ಯರನ್ನಾಗಿ ಬಿ.ಎನ್. ಚಂದ್ರಪ್ಪ, ಜಮೀರ್ ಅಹಮದ್, ಸರೋಜಮ್ಮ ಲಕ್ಷ್ಮಪ್ಪ, ಬಿ.ಹೆಚ್. ಹನು ಮಂತಪ್ಪ ಅವರನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅವರ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ.
April 28, 2025