ಹರಿಹರ ಬ್ಲಾಕ್‌ `ಮಹಿಳಾ ಕಾಂಗ್ರೆಸ್‌’ ಅಧ್ಯಕ್ಷರಾಗಿ ಪಾರ್ವತಿ

ಹರಿಹರ, ಜ.16- ಹರಿಹರ ಬ್ಲಾಕ್‌ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಶ್ರೀಮತಿ ಪಾರ್ವತಿ ಬೌರಯ್ಯ ಅವರನ್ನು ನೇಮಕ ಮಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೇಮಕಾತಿ ಪತ್ರ ಹಾಗೂ ಪಕ್ಷದ ಬಾವುಟ ಕೊಡಿಸಲಾಯಿತು. ಶಾಸಕ ಎಸ್‌. ರಾಮಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅನಿತಾಬಾಯಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಬಿ. ಮಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಗಳಾದ ಎಲ್‌.ಬಿ. ಹನುಮಂತಪ್ಪ, ಎಂ.ಬಿ. ಅಬೀದ್‌ ಅಲಿ, ಶಂಕರ್‌ ಖಟಾವಕರ್‌, ಕೆ. ರೇವಣಸಿದ್ದಪ್ಪ, ಸಿ.ಎನ್. ಹುಲ ಗೇಶ್, ಎಂ. ನಾಗೇಂದ್ರಪ್ಪ, ಜಿ. ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!