ಹರಿಹರದಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

ಹರಿಹರ,ಸೆ.13- ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟಕ್ಕೆ ಯತ್ನಿಸಿದ ವೇಳೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ 1,25,100 ರೂ. ಮೌಲ್ಯದ 4 ಕೆ.ಜಿ. 170 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಭದ್ರಾವತಿ ನಗರದ ಜನ್ನಾಪುರದ ರಾಹುಲ್, ಶಿವಮೊಗ್ಗದ ಜ್ಯೋತಿ ನಗರದ ಮಲ್ಲಿಕಾರ್ಜುನ ಯಾನೆ ಮಲ್ಲು, ಭದ್ರಾವತಿ ಪೇಪರ್ ಟೌನ್‌ನ ಪ್ರಮೋದ್ ಬಂಧಿತರು. ಹರಿಹರ ಸಿಪಿಐ ಎಂ. ಶಿವಪ್ರಸಾದ್ ಮುಂದಾಳತ್ವದಲ್ಲಿ  ಸಿಬ್ಬಂದಿಗಳಾದ ಲಿಂಗರಾಜ್, ನಾಗರಾಜ್ ಸುಣಗಾರ,  ದ್ವಾರಕೀಶ್, ಸತೀಶ್, ಶಿವರಾಜ್, ಕೃಷ್ಣ, ರವಿ, ಸಿದ್ದರಾಜು, ಮಹಮದ್ ಇಲಿಯಾಸ್, ನಾಗರಾಜ್, ಮುರುಳಿಧರ, ಸಿದ್ದಪ್ಪ ಅವರನ್ನೊಳಗೊಂಡ ತಂಡ ಈ ದಾಳಿ ಮಾಡಿದೆ.

error: Content is protected !!