ಚನ್ನಗಿರಿ, ಆ.17- ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದ ಆರೋಪದಡಿ ಜೈಲು ಸೇರಿದ್ದ ಆರೋಪಿಯೋರ್ವ ಜಾಮೀನಿನ ಮೇಲೆ ಹೊರ ಬಂದ ಎರಡೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟದ ಬಳಿ ಇಂದು ನಡೆದಿದೆ. ಮುದಿಗೆರೆ ಗ್ರಾಮದ ಸ್ವಾಮಿ ಪಟೇಲ್ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಎರಡು ತಿಂಗಳ ಹಿಂದಷ್ಟೇ ತನ್ನ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ ಸ್ವಾಮಿ ಪಟೇಲ್ ಜೈಲಿನಲ್ಲಿದ್ದ. ಚನ್ನಗಿರಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ-13ರ ದೊಡ್ಡಘಟ್ಟ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
February 24, 2025