ಬೈಕ್ ಶೋ ರೂಂ ಸೆಲ್ಲರ್‌ನಲ್ಲಿ ಆಕಸ್ಮಿಕ ಬೆಂಕಿ

ದಾವಣಗೆರೆ, ಆ.14-‌   ನಗರದ ಜೆ.ಹೆಚ್. ಪಟೇಲ್ ರಸ್ತೆಯಲ್ಲಿರುವ ರುತ್ವಿ ಬೈಕ್ ಶೋ ರೂಂನ ನೆಲ ಮಾಳಿಗೆಯಲ್ಲಿ ಇಂದು ರಾತ್ರಿ 10 ಗಂಟೆಯ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ, ನಷ್ಟವಾಗಿಲ್ಲ.

ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳವು ಅಧಿಕಾರಿ ಬಸವಪ್ರಭು ಶರ್ಮಾ ನೇತೃತ್ವದಲ್ಲಿ ಮೂರು ಅಗ್ನಿ ಶಾಮಕ ವಾಹನಗಳನ್ನು ಬಳಸಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಮುಂದಾದರು. ಅಗ್ನಿಶಾಮಕ ತಂಡವು ವ್ಯಾಪಿಸುತ್ತಿದ್ದ ಬೆಂಕಿ ಜ್ವಾಲೆಯನ್ನು ತಹಬಂದಿಗೆ ತಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.  

error: Content is protected !!