ದಾವಣಗೆರೆ, ಡಿ.23- ಎರಡು ಮೋಟಾರ್ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರರಿ ಬ್ಬರೂ ಮೃತಪಟ್ಟಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ನಡೆದಿದೆ.
ಹಿರೇಮಳಲಿ ಗ್ರಾಮದ ತಿಪ್ಪೇಶಪ್ಪ (42), ಚಿಕ್ಕಮಗಳೂ ರು ಜಿಲ್ಲೆ ತರಿಕೆರೆ ಗ್ರಾಮದ ಅರುಣ್ (28) ಮೃತ ಸವಾರರು. ಗ್ರಾಮದ ಹೊಸೂರಪ್ಪ ಅವರ ಮಗ ತಿಪ್ಪೇಶಪ್ಪ ಬೈಕ್ ನಲ್ಲಿ ಹಿರೇಮಳಲಿ ಗ್ರಾಮದಿಂದ ನಲ್ಲೂರು ಗ್ರಾಮದ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಅದೇ ವೇಳೆಗೆ ಮೇಳನಾಯ್ಕನ ಕಟ್ಟೆ ಗ್ರಾಮದ ಕಡೆಯಿಂದ ಹಿರೇಮಳಲಿ ಗ್ರಾಮ ದ ಕಡೆಗೆ ಬೇರೆ ಬೈಕ್ ನಲ್ಲಿ ಬರುತ್ತಿದ್ದ ಅರುಣ್ ಚಾಲನೆ ಮಾಡಿಕೊಂಡು ಬರುವಾಗ ನಲ್ಲೂರು-ಹಿರೇಮಳಲಿ ರಸ್ತೆಯಲ್ಲಿ ಎರಡೂ ಬೈಕ್ ಗಳು ಡಿಕ್ಕಿಯಾಗಿ ಜಖಂಗೊಂಡಿವೆ.