ದಾವಣಗೆರೆ, ಡಿ.23- ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗದ ವಿದ್ಯುತ್ ಶಾಖೆಯಲ್ಲಿ ದುರಸ್ತಿಗಾಗಿ ನಿಂತಿದ್ದ ಎರಡು ಬಸ್ ಗಳ ಒಟ್ಟು 35 ಸಾವಿರದ 954 ರೂ. ಮೌಲ್ಯದ 4 ಬ್ಯಾಟರಿಗಳು ಕಳುವಾಗಿರುವ ಬಗ್ಗೆ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ 15ರಂದು ಚಿತ್ರದುರ್ಗ ವಿಭಾಗದ ಹೊಸದುರ್ಗ ಘಟಕದಿಂದ ನವೀಕರಣಕ್ಕಾಗಿ ಹಾಗೂ 18ರಂದು ಚಳ್ಳಕೆರೆ ಘಟಕದಿಂದ ಅಪಘಾತ ದುರಸ್ತಿಗಾಗಿ ದಾವಣಗೆರೆ ವಿಭಾಗಕ್ಕೆ ಬಸ್ ಗಳು ಬಂದಿದ್ದವು. ಆ ಬಸ್ ಗಳಿಗೆ ಅಳವಡಿಸಿದ್ದ ಬ್ಯಾಟರಿಗಳು ಕಳ್ಳತನವಾಗಿವೆ ಎಂದು ದಾವಣಗೆರೆ ವಿಭಾಗದ ವಿಭಾಗೀಯ ಕಾರ್ಯಾಧೀಕ್ಷಕ ಎ.ಎನ್. ರವಿ ದೂರಿನಲ್ಲಿ ತಿಳಿಸಿದ್ದಾರೆ.