ಅಪರಿಚಿತ ಯುವಕನ ಶವ ಪತ್ತೆ

ದಾವಣಗೆರೆ, ಡಿ.21- ಕೈದಾಳಿನ ಸಾಲಕಟ್ಟೆ ಮಲ್ಲಪ್ಪನವರ ಹೊಲದ ನೇರ ಸರ (ಕಾಲುವೆಯಲ್ಲಿ) ಸುಮಾರು 25 ರಿಂದ 30 ವರ್ಷ ವಯಸ್ಸಿನ ಶವ ನಿನ್ನೆ ಪತ್ತೆಯಾಗಿದೆ. ಬಾಯಾರಿಕೆಯಿಂದ ನೀರು ಕುಡಿಯಲು ಹೋದಾಗ ಕಾಲು ಜಾರಿ ಅಥವಾ ಮದ್ಯಸೇವನೆ ಮಾಡಿಯೋ ಬಂದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಹಸಿರು ಮತ್ತು ಹಳದಿ ಬಣ್ಣದಿಂದ ಕೂಡಿರುವ ತುಂಬು ತೋಳಿನ ಟೀ ಶರ್ಟ್‌, ಕಪ್ಪು ಬಣ್ಣದ ಚಡ್ಡಿ ಧರಿಸಿರುವ ಮೃತನ ಬಲಗೈಯಲ್ಲಿ ಅಮ್ಮ, ನಾಗ, ಕುಮಾರ ಎಂದು ಅಚ್ಚೆ ಗುರುತು ಇದೆ. ಸಂಬಂಧಪಟ್ಟವರು ಹದಡಿ ಪೊಲೀಸ್‌ ಠಾಣೆ (08192-218405, ಮೊ.94808 03254) ಯನ್ನು ಸಂಪರ್ಕಿಸಬಹುದು.

error: Content is protected !!