ಹರಿಹರ,ಡಿ.17- ಇಲ್ಲಿಗೆ ಸಮೀಪದ ಪಿ.ಬಿ. ರಸ್ತೆಯಲ್ಲಿ ಇಂದು ರಾತ್ರಿ 8.30ರ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಡೆದಿದೆ.
ಮೃತನನ್ನು ಹಿರೇಕೆರೂರಿನ ದೇವರಾಜ್ ಎಂದು ಗುರುತಿಸಲಾಗಿದೆ. ಸುಮಾರು 32 ವರ್ಷ ವಯಸ್ಸಿನ ದೇವರಾಜ್, ಕಳೆದ ಒಂದೂವರೆ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದು, ಮೂರು ತಿಂಗಳ ಮಗು ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರಾಜ್, ದಾವಣಗೆರೆ ಕಡೆಯಿಂದ ನಗರದತ್ತ ಕೆಎ 27- ಬಿ 9229 ಸಂಖ್ಯೆಯ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಮೂರು ಬಾರಿ ಪಲ್ಟಿಯಾಗಿ ಈ ದುರಂತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಕಾರಿನಲ್ಲಿ ದೇವರಾಜ್ ಮಾತ್ರ ಇದ್ದರೆಂದು ಹೇಳಲಾಗಿದೆ.
ದೇವರಾಜ್ ಮೊಬೈಲ್ ಫೋನ್ ನಲ್ಲಿ ಮಾತನಾ ಡುವುದರ ಜೊತೆಗೆ ವೇಗವಾಗಿ ಕಾರು ಚಲಾಯಿಸುತ್ತಿದ್ದ ಪರಿಣಾಮಲವೇ ಕಾರು ನಿಯಂತ್ರಣಕ್ಕೆ ಬಾರದಿರಲು ಕಾರಣ ಎಂದು ಪೊಲೀಸರು ಊಹಿಸಿದ್ದಾರೆ.
ವಿಷಯ ತಿಳಿದೊಡನೆ ಹರಿಹರ ಗ್ರಾಮಾಂತರ ಠಾಣೆ ಸಬ್ ಇನ್ ಸ್ಪೆಕ್ಟರ್ ರವಿಕುಮಾರ್, ಸಾಮಾಜಿಕ ಸೇವಾ ಕಾರ್ಯಕರ್ತ ಎಂ.ಆರ್. ಸೈಯದ್ ಸನಾವುಲ್ಲಾ, ಅಂಬ್ಯುಲೆನ್ಸ್ ಚಾಲಕ ಮೊಹಮ್ಮದ್ ಅಲಿ ಅವರುಗಳು ಶವವನ್ನು ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.