ದಾವಣಗೆರೆ, ಡಿ.16- ಜಸ್ಟ್ ಇನ್ ಡೀಲ್ ಕಂಪೆನಿಯವರು ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು, ಹೂಡಿಕೆದಾರರಿಗೆ ವಾಪಸ್ ನೀಡದೇ ಮೋಸ ಮಾಡಿರುತ್ತಾರೆಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ದಾಖಲಾಗಿರುತ್ತದೆ.
ವನಜಾಕ್ಷಿ ಎಂಬುವವರು ಜುಲೈ 18 ರಂದು ಜಸ್ಟ್ ಇನ್ ಡೀಲ್ ಕಂಪೆನಿಯ ಮಾಲೀಕರು ಮತ್ತು ಇತರೆಯವರ ವಿರುದ್ದ ದೂರು ದಾಖಲಿಸಿರುತ್ತಾರೆ. ಈ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವವರು ಯಾರಾದರೂ ಇದ್ದರೆ ಅಂತಹ ಹೂಡಿಕೆದಾರರು ದಾಖಲಾತಿಗಳೊಂದಿಗೆ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯವರನ್ನು ಸಂಪರ್ಕಿಸಿ, ದೂರು ಸಲ್ಲಿಸಬಹುದೆಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.