ದಾವಣಗೆರೆ, ಡಿ.13- ಮಗನೇ ತನ್ನ ತಂದೆಯನ್ನು ಅಮಾನುಷ ವಾಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ವಡ್ಡಿನಹಳ್ಳಿಯಲ್ಲಿ ಇಂದು ಬೆಳಕಿಗೆ ಬಂದಿದೆ.
ರಾಮಚಂದ್ರಪ್ಪ ಹತ್ಯೆಯಾದ ತಂದೆ. ಸಿದ್ದೇಶ್ ಕೊಲೆಗೈದ ಮಗ. ಮದ್ಯ ವ್ಯಸನಿಯಾಗಿದ್ದ ರಾಮ ಚಂದ್ರಪ್ಪ ಪದೇ ಪದೇ ಹಣ ನೀಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತ ಮಗ ಸಿದ್ದೇಶ್ ದೊಣ್ಣೆಯಿಂದ ತಲೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಸಿದ್ದೇಶ್ ನಿತ್ಯ ತನ್ನ ತಂದೆಗೆ ಮದ್ಯ ಸೇವನೆಗೆ ಹಣ ನೀಡಿ ಸಾಕಾಗಿದ್ದ. ಈ ವಿಷಯದಲ್ಲಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.
ಹೊಲದಲ್ಲಿದ್ದ ರಾಮ ಚಂದ್ರ ಪ್ಪನ ಹಿಂಬದಿಯಿಂದ ಬಂದ ಸಿದ್ದೇಶ್ ದೊಣ್ಣೆಯಿಂದ ತಲೆಗೆ ಹೊಡೆದಾಕ್ಷಣ ಗಂಭೀರ ವಾಗಿ ಗಾಯಗೊಂಡ ರಾಮಚಂದ್ರಪ್ಪ ಕುಸಿದು ಬಿದ್ದಿದ್ದು, ಇದನ್ನು ಗಮನಿ ಸಿದ ಸ್ಥಳೀಯರು ಗಾಯಾಳು ರಾಮಚಂದ್ರಪ್ಪನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಸದೇ ಮೃತಪಟ್ಟಿದ್ದಾನೆ.
ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಸಿದ್ದೇಶ್‍ನನ್ನು ಬಂಧಿಸಿದ್ದಾರೆ.