ದಾವಣಗೆರೆ, ಡಿ.9- ಚಾಲಕನು ವೇಗವಾಗಿ ಚಲಿಸಿದ ಕಾರಣ ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿಯಾಗಿ ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಆನಗೋಡು ಗ್ರಾಮದ ಸಮೀಪದ ಆನಗೋಡು-ಶಿವಪುರ ರಸ್ತೆಯ ತಿರುವಿನಲ್ಲಿ ಇಂದು ನಡೆದಿದೆ. ತಾಲ್ಲೂಕಿನ ಸಿದ್ದನೂರು ಗ್ರಾಮದ ಎಸ್.ಆರ್. ರಾಜು ಮೃತ ದುರ್ದೈವಿ. ಅದೇ ಗ್ರಾಮದ ಪರಶುರಾಮ ಎಂಬಾತ ತಿರುವಿನಲ್ಲಿ ವೇಗವಾಗಿ ಚಲಿಸಿದ ಪರಿಣಾಮ ನಿಯಂತ್ರಣಕ್ಕೆ ಸಿಗದೇ ಬೈಕ್ ಮರದ ಹತ್ತಿರ ನಿಂತಿದ್ದ ಅದೇ ಗ್ರಾಮದ ರಮೇಶನಿಗೆ ಡಿಕ್ಕಿಪಡಿಸಿ, ನಂತರ ಮರಕ್ಕೆ ಗುದ್ದಿದೆ. ಗಾಯಗೊಂ ಡಿದ್ದ ರಮೇಶನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾಗು ತ್ತಿದ್ದಂತೆ ಬೈಕ್ ಬಿಟ್ಟು ಚಾಲಕ ಪರಶುರಾಮ ಪರಾರಿಯಾಗಿದ್ದಾನೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
January 11, 2025