ದಾವಣಗೆರೆ, ಡಿ.9- ಕ್ರೇನ್ ಡಿಕ್ಕಿಯಾದ ಪರಿಣಾಮ ಭಿಕ್ಷೆ ಬೇಡುತ್ತಿದ್ದ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಸೇತುವೆ ಬಳಿ ಇಂದು ಬೆಳಿಗ್ಗೆ ನಡೆದಿದೆ. ಉತ್ತರ ಪ್ರದೇಶ ಮೂಲದ ಮನೀಸಾ (18), ಅನಂತ್ ಸಿಂಗ್ (12) ಮೃತ ದುರ್ದೆವಿಗಳು. ಅಕ್ಕ ಮನೀಸಾಳು ವ್ಹೀಲ್ ಚೇರ್ ನಲ್ಲಿ ವಿಶೇಷ ಚೇತನನಾದ ತನ್ನ ಸಹೋದರನನ್ನು ಕೂರಿಸಿಕೊಂಡು ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದಾಗ ಚನ್ನಗಿರಿಯಿಂದ ನಲ್ಲೂರಿಗೆ ಬರುತ್ತಿದ್ದ ಕ್ರೇನ್ ಏಕಾಏಕಿ ವ್ಹೀಲ್ ಚೇರ್ ಗೆ ಡಿಕ್ಕಿ ಹೊಡೆದಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
January 11, 2025